+91-8482-245241 regkvafsu@gmail.com

ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗ

ಪಶುವೈದ್ಯಕೀಯ ಔಷಧ ವಿಜ್ಞಾನ ಮತ್ತು ವಿಷವಿಜ್ಞಾನ ವಿಭಾಗವು ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾನುವಾರುಗಳನ್ನು ಕಾಡುವಂತಹ ರೋಗಗಳಿಗೆ ನೀಡುವ ಔಷಧಿಗಳ ಬಗ್ಗೆ ವಿಸ್ತೃತವಾದ ಮಾಹಿತಿ, ಬಳಸುವ ವಿಧಾನ, ಪ್ರಮಾಣ, ದೇಹದಲ್ಲಿ ಔಷಧಿಗಳ ಕಾರ್ಯವೈಖರಿ, ಔಷಧಿಗಳಿಂದ ಉಂಟಾಗುವ ಅಡ್ಡ ಪರಿಣಾಮಗಳು ಬಗೆಗಿನ ಬೋಧನೆಯಲ್ಲಿ ತೊಡಗಿಸಿಕೊಂಡಿದೆ. ಜಾನುವಾರುಗಳಲ್ಲಿ ಕಂಡು ಬರುವಂತಹ ವಿಷಬಾಧೆಗಳು, ಪತ್ತೆಹಚ್ಚುವಿಕೆಯ ವಿಧಾನ ಹಾಗೂ ಚಿಕಿತ್ಸೆ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತಿದೆ. ಜಾನುವಾರುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ವಿಷಬಾಧೆಗಳನ್ನು ಪತ್ತೆಹಚ್ಚುವಿಕೆಯ ಕಾರ್ಯದಲ್ಲೂ ಕೂಡ ಈ ವಿಭಾಗ ಕಾರ್ಯನಿರತವಾಗಿದೆ. ಔಷಧೀಯ ಗುಣವುಳ್ಳ ವಿವಿಧ ಸಸ್ಯಗಳ ಬಗೆಗಿನ ಸಂಶೋಧನೆಗಳು ನಡೆಯುತ್ತಿವೆ.