ಪ್ರೊ. ಎಂ. ನಾರಾಯಣ ಸ್ವಾಮಿ.
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಒಟ್ಟು 33 ವರ್ಷಗಳ ಬೋಧನೆಯ ಅನುಭವ. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ 17 ಸ್ನಾತಕೋತ್ತರ ಮತ್ತು 7 ಡಾಕ್ಟರೇಟ್ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಒಟ್ಟು 68 ಮಾಸ್ಟರ್ಸ್ ಮತ್ತು 21 ಡಾಕ್ಟರಲ್ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಒಟ್ಟು 272 ವೈಜ್ಞಾನಿಕ ಪ್ರಕಟಣೆಗಳನ್ನು ಪ್ರಕಟಿಸಿದ್ದಾರೆ, ಇದರಲ್ಲಿ 102 ಸಂಶೋಧನಾ ಲೇಖನಗಳು, 65 ಸಾರಾಂಶಗಳು, 18 ಸಾಮಾನ್ಯ ವೈಜ್ಞಾನಿಕ ಲೇಖನಗಳು, 80 ಜನಪ್ರಿಯ ಲೇಖನಗಳು ಮತ್ತು 07 ಪುಸ್ತಕಗಳು ಸೇರಿವೆ ವಿಶ್ವವಿದ್ಯಾಲಯ ಅನುದಾನಿತ ಎರಡು ಸಂಶೋಧನಾ ಪ್ರಾಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಕನ್ನಡದಲ್ಲಿ 1. ಜಾನುವಾರು, 2. ತೆನೆಮರೆಯ ಕ್ರಾಂತಿ ರಾಗಿ ಲಕ್ಷ್ಮಣಯ್ಯ, 3. ನಿಮಗೆ ನೀವೇ ಬೆಳಕಾಗಿ, 4. ಪಶುವೈದ್ಯ ಸಂಪದ, 5. ಮಹಾನದಿಯ ಉಗಮ, 6. ಜ್ಞಾನ ವಿಜ್ಞಾನ ಮತ್ತು 7. ಮರೆಯಲಾಗದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂಬ ಒಟ್ಟು ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರವು 2017 ರಲ್ಲಿ ಬೆಂಗಳೂರಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಅಂತರರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರಾಗಿ ಸುಮಾರು ಒಂದು ವರ್ಷ ಕಾಲ ಕಾರ್ಯನಿರ್ವಹಿಸಿದರು ಮತ್ತು ಸಮ್ಮೇಳನದಲ್ಲಿ ಒಂದು ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. 2017 ರಿಂದ 2020 ರವರಗೆ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 2019 ರಲ್ಲಿ ಹೈದರಾಬಾದಿನ ರಾಷ್ಟ್ರೀಯ ಕೃಷಿ ಸಂಶೋಧನಾ ನಿರ್ವಹಣೆಯ ಅಕಾಡೆಮಿಯವರು ನಡೆಸಿದ ‘ಬೋಧನಾ ತಂತ್ರಜ್ಞಾನ’ದ ಒಂದು ತಿಂಗಳ ಮೂಕ್ ಕೋರ್ಸಿನಲ್ಲಿ ಉತ್ತೀರ್ಣತೆ ಹೊಂದಿದ್ದಾರೆ. ಕೆಲವು ಅಂತರರಾಷ್ಟ್ರೀಯ ಜರ್ನಲ್ಲುಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿದ್ದಾರೆ. |
ಪ್ರಶಸ್ತಿಗಳು: |
ಜಂಟಿಯಾಗಿ ದೊರೆತ ಪ್ರಶಸ್ತಿಗಳು : |
ಪ್ರಕಟಣೆಗಳು |
|