ಹೈನು ಅಭಿಯಾಂತ್ರಿಕ ವಿಭಾಗ
ಹೈನು ಅಭಿಯಾಂತ್ರಿಕ ವಿಭಾಗವು 15 ಸ್ನಾತಕ ಪದವಿಯ ಪಠ್ಯಕ್ರಮಗಳನ್ನು ವಿದಾರ್ಥಿಗಳಿಗೆ ಬೋಧಿಸುತ್ತಿದೆ. ಸಹಾಯಕ ಪ್ರಾಧ್ಯಾಪಕರಾದ ಡಾ. ಆರ್. ದೇವರಾಜು ಅವರು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಹಂಗಾಮಿ ಸಹಾಯಕ ಪ್ರಾಧ್ಯಾಪಕರ ಸೇವೆಯನ್ನು ಬಳಸಿಕೊಳ್ಳಲಾಗಿದೆ. ಪ್ರಚಲಿತ ಪಠ್ಯಕ್ರಮ ಹಾಗೂ ಹೈನೋದ್ಯಮದ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು, ವಿದ್ಯಾರ್ಥಿಗಳಿಗೆ ಯಶಸ್ವಿ ಉದ್ಯಮಶೀಲರಾಗಲು ಅಗತ್ಯ ಸ್ಪೂರ್ತಿ ತುಂಬುವ ಮತ್ತು ನವ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೂಳ್ಳುವ ತರಬೇತಿ ನೀಡುವಲ್ಲಿ ವಿಭಾಗವು ಶ್ರಮಿಸುತ್ತಿದೆ.
©2019 copyright kvafsu.edu.in
Powered by : Premier Technologies