+91-8482-245241 regkvafsu@gmail.com

ಸೌಲಭ್ಯಗಳು

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ

ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಸುಮಾರು 10,000 ಪುಸ್ತಕಗಳು, 1258 ಇ-ಪುಸ್ತಕಗಳು ಮತ್ತು 35 ಸಂಶೋಧನಾ ಪ್ರಬಂಧಗಳಿವೆ. ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಪುಸ್ತಕಗಳನ್ನು ಎರವಲು ನೀಡಲಾಗುವುದು. ಭಾಷಾ ಪ್ರಯೋಗಾಲಯ ಕೊಠಡಿಯಲ್ಲಿ ಸಾಮಾನ್ಯ ಜ್ಞಾನದ ಪುಸ್ತಕಗಳು, ಇಂಗ್ಲೀಷ್ ಮತ್ತು ಕನ್ನಡ ಕಥೆ, ಕಾದಂಬರಿ ಪುಸ್ತಕಗಳಿವೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಅಂತರಜಾಲ ಸಂಪರ್ಕ ಇರುವ ಗಣಕಯಂತ್ರ ವ್ಯವಸ್ಥೆ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಪುಸ್ತಕ ಭಂಡಾರದಿಂದ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರತಿ ವರ್ಷ ಎರಡು ಪುಸ್ತಕಗಳನ್ನು ಒಂದು ವರ್ಷದ ಅವಧಿಯವರಿಗೆ ಎರವಲು ನೀಡಲಾಗುತ್ತಿದೆ.

ವಿದ್ಯಾರ್ಥಿನಿಲಯ

ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಸಹ್ಯಾದ್ರಿ ಬಾಲಕರ ವಿದ್ಯಾರ್ಥಿನಿಲಯ ಹಾಗೂ ತುಂಗಾ ಬಾಲಕಿಯರ ವಿದ್ಯಾರ್ಥಿನಿಲಯಗಳಿದ್ದು, ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಯಂತಹ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ವಿದ್ಯಾರ್ಥಿನಿಲಯಗಳಲ್ಲಿ ಸುಸಜ್ಜಿತವಾದ ಭೋಜನಾಲಯ, ವಾಚನಾಲಯ, ಜಿಮ್ ಕೊಠಡಿ ಇದೆ. ಬಾಲಕರ ವಿದ್ಯಾರ್ಥಿನಿಲಯದಲ್ಲಿ 70 ಕೊಠಡಿಗಳಿದ್ದು, ಸುಮಾರು 210 ವಿದ್ಯಾರ್ಥಿಗಳಿಗೆ ವಸತಿಯನ್ನು ಕಲ್ಪಿಸಬಹುದಾಗಿದೆ. ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 32 ಕೊಠಡಿಗಳಿದ್ದು, ಸುಮಾರು 96 ವಿದ್ಯಾರ್ಥಿಗಳಿಗೆ ವಸತಿಯನ್ನು ಕಲ್ಪಿಸಬಹುದಾಗಿದೆ. ವಿದ್ಯಾರ್ಥಿನಿಲಯದ ಮುಖ್ಯಕ್ಷೇಮಪಾಲಕರಾಗಿ ಡಾ. ಚಿದಾನಂದಯ್ಯ. (9480221157), ಮತ್ತು ಡಾ. ಲಕ್ಷ್ಮಿಶ್ರೀ. (821760993), ಸಹಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಇಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಕ್ರೀಡಾ ಸೌಲಭ್ಯಗಳು

ಹೊರಾಂಗಣ ಆಟಗಳ ಸೌಲಭ್ಯ: ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕ್ರೀಡಾ ಚಟುವಟಿಕೆಗಳಿಗಾಗಿ ವಾಲಿಬಾಲ್, ಖೋ-ಖೋ, ಕಬಡ್ಡಿ, ಕ್ರಿಕೆಟ್ ಹಾಗೂ ಫುಟ್‍ಬಾಲ್ ಅಂಕಣಗಳನ್ನು ಹೊಂದಿದೆ. ಸಿಮೆಂಟ್ ತಳಹಾಸಿನ ಬ್ಯಾಸ್ಕೆಟ್‍ಬಾಲ್ ಅಂಕಣವಿದೆ.
ಒಳಾಂಗಣ ಆಟಗಳ ಸೌಲಭ್ಯ: ಕಬಡ್ಡಿಗಾಗಿ ಮ್ಯಾಟ್ ಒಳಾಂಗಣ ಅಂಕಣ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕೇರಂ, ಚೆಸ್ ಕ್ರೀಡೆಗಳಿಗೆ ಮತ್ತು ಜಿಮ್ನಾಷಿಯಂಗೆ ಸ್ಥಳ ಕಲ್ಪಿಸಲಾಗಿದೆ.

ರೈತರ ತರಬೇತಿ ಕೇಂದ್ರ

ತರಬೇತಿಗಾಗಿ ಬರುವ ರೈತರ ವಾಸ್ತವ್ಯಕ್ಕೆ ಉಚಿತ ವಸತಿ ಸೌಲಭ್ಯವಿದೆ. ರೈತ ತರಬೇತಿ ಕೇಂದ್ರದಲ್ಲಿ 9 ವಿಶ್ರಾಂತಿ ಕೊಠಡಿಗಳು, ತರಬೇತಿ ಸಭಾಂಗಣ ಮತ್ತು ಅಡಿಗೆ ಮಾಡುವ ವ್ಯವಸ್ಥೆಗಳನ್ನು ಹೊಂದಿದೆ.