+91-8482-245241 regkvafsu@gmail.com

ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರ (ಅಮೃತಮಹಲ್), ಕೊನೇಹಳ್ಳಿ, ತಿಪಟೂರು

ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ(ಅಮೃತ ಮಹಲ್)ಈ ಸಂಸ್ಥೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೊನೇಹಳ್ಳಿ ಗ್ರಾಮದಲ್ಲಿ ಕಾರ್ಯಚರಿಸುತ್ತಿದೆ.ಈ ಸಂಸ್ಥೆಯು ಬೆಂಗಳೂರು ಹೊನ್ನಾವರ ರಾಷ್ರಿಯ ಹೆದ್ದಾರಿ ಯಿಂದ 2.0 ಕಿ.ಮಿ. ಹಾಗೂ ತಿಪಟೂರು ನಗರದಿಂದ 15.0 ಕಿ.ಮಿ. ದೂರ ಇರುತ್ತದೆ. ಈ ಕೇಂದ್ರವು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಡಿ ಕಾರ್ಯಚರಿಸಿ ಪ್ರಸ್ತುತ 2005ರಿಂದ ಬೀದರ್‍ನ ಕರ್ನಾಟಕ ಪಶು ವೈಧ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನದ ಸಂಸ್ಥೆಯಾಗಿ ಕಾರ್ಯಚರಿಸುತ್ತಿದೆ. ಈ ಸಂಶೋಧನಾ ಕೇಂದ್ರದ ಒಟ್ಟು ಭೌಗಳಿಕ ವಿಸ್ತಿರಣವು 1342.00 ಎಕರೆ ಇರುತ್ತದೆ. ಇದರಲ್ಲಿ ಕೃಷಿ ಯೋಗ್ಯ ಸಾಗುವಳಿ ಭೂಮಿಯು ಸುಮಾರು 100.0 ಎಕರೆ ಇರುತ್ತದೆ. ಈ ಸಂಸ್ಥೆಯ ಮುಖ್ಯ ಧ್ಯೇಯ್ಯೋದೇಶ ಅಮೃತ್ ಮಹಲ್ ತಳಿಯ ಹಸುವನ್ನು ಸಂರಕ್ಷಿಸುವುದು ಮತ್ತು ಅವುಗಳ ಕುರಿತು ಸಂಶೋಧನೆ ಕೈಗೊಳುವುದು. ಇಲ್ಲಿ ಅಮೃತ್ ಮಹಲ್ ಘಟಕ ಕಾರ್ಯಚರಿಸುತ್ತಿದ್ದು 77 ಹಸುಗಳನ್ನು ಸಾಕಲಾಗುತ್ತಿದೆ. ಇದರೊಂದಿಗೆ ಹೈನುಗಾರಿಕೆ ಘಟಕ ಕೂಡ ಕಾರ್ಯಚರಿಸುತ್ತಿದ್ದು ಇದರಲ್ಲಿ 38 ಹೈನುರಾಸುಗಳು ಇರುತ್ತವೆ. ಸುಮಾರು 80.0 ಎಕರೆ ಪ್ರದೇಶದಲ್ಲಿ ವಿವಿಧ ಮೇವು ಬೆಳೆಗಳನ್ನು ಬೆಳೆಸಲಾಗುತ್ತಿದ್ದು ಇವುಗಳ ಬೇಸಾಯ ಕ್ರಮಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ. ಈ ಪ್ರದೇಶಕ್ಕೆ ಹೊಂದುವ ಬಹುವಾರ್ಷಿಕ ಹಸಿರು ಮೇವಿನ ಬೆಳೆಗಳಾದ Co-3, CoFS-29, CoFS-31, Co-4, Super Napier, ಕುದುರೆಮೆಂತೆ, ಚೊಗಚಿ, ಮುಂತಾದ ಹಸಿರು ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ ಘಟಕಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. ಒಣ ಮೇವಿಗಾಗಿ ರಾಗಿಯನ್ನು ಬೆಳೆಸಲಾಗುತ್ತಿದೆ. ಇದರೊಂದಿಗೆ ಅಲ್ಪಾವಧಿ ಬೆಳೆಗಳಾದ ಅಲಸಂದೆ, ಮೆಕ್ಕೆಜೋಳ, ಇಬ್ಬನಿಜೋಳ ಮುಂತಾದವುಗಳನ್ನು ಬೆಳೆಸಲಾಗುತ್ತಿದೆ. ಕೇಂದ್ರಕ್ಕೆ ಬೇಟಿ ನೀಡುವ ರೈತ ಸಂದರ್ಶಕರಿಗೆ ಪ್ರಾತ್ಯಕ್ಷಿಕ ಘಟಕಗಳಿಗೆ ಬೇಟಿಯನ್ನು ಏರ್ಪಡಿಸಿ ಸಮಗ್ರ ಮಾಹಿತಿಯನ್ನು ನೀದಲಾಗುತ್ತಿದೆ. ಇಲ್ಲಿ ಕಾರ್ಯಚರಿಸುತ್ತಿರುವ ಪಶುಸಂಗೋಪನಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಹೈನುಗಾರಿಕೆ ವೈಜ್ಞಾನಿಕ ನಿರ್ವಹಣೆ, ಕೃತಕ ಗರ್ಭದಾರಣೆ, ರೋಗ ನಿರ್ವಹಣೆ ಹಾಗೂ ವಿವಿಧ ಲಸಿಕೆಗಳ ಮಾಹಿತಿ, ರಸಮೇವು ತಯಾರಿಕೆ, ವಿವಿಧ ಮೇವಿನ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳು ಮುಂತಾದವುಗಳ ಕುರಿತು ತಾಂತ್ರಿಕ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಕೆಲಸದ ಅನುಭವವನ್ನು ನೀಡಲಾಗುತ್ತದೆ.