ಪಶುಸಂಗೋಪನಾ ಪಾಲಿಟೆಕ್ನಿಕ್, ದೋರನಹಳ್ಳಿ, ಶಹಪುರ, ಯಾದಗಿರಿ ಜಿಲ್ಲೆ
ದೋರನಹಳ್ಳಿಯ ಪಶುಸಂಗೋಪನಾ ಪಾಲಿಟೆಕ್ನಿಕ್ ಸಂಸ್ಥೆಯು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿದೆ. ಈ ಸಂಸ್ಥೆಯು 2017-18 ರಿಂದ ಕಾರ್ಯನಿರ್ವಹಿಸುತ್ತಿದೆ. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಗೆ ಹತ್ತಿರದಲ್ಲಿದೆ. ಎರಡು ವರ್ಷಗಳ (ನಾಲ್ಕು ಸೆಮಿಸ್ಟರ್) ‘ಪಶು ಸಂಗೋಪನಾ ಡಿಪ್ಲೊಮಾ’ ಪ್ರಮಾಣ ಪತ್ರವನ್ನು ಪಡೆಯಲು ಪ್ರತಿ ವರ್ಷ ಈ ಸಂಸ್ಥೆಗೆ ಹತ್ತನೇ ತರಗತಿ ಪೂರ್ಣಗೊಳಿಸಿದ ಸುಮಾರು 50 ಗ್ರಾಮೀಣ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ರೈತರಿಗಾಗಿ ಮೇವು ಉತ್ಪಾದನೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮತ್ತಿತರ ತರಬೇತಿ ನೀಡಲಾಗುತ್ತ್ತಿದೆ.
ಪ್ರಾಂಶುಪಾಲರು (ಹೆಚ್ಚುವರಿ ಪ್ರಬಾರ)
ಡಾ. ಚನ್ನಪ್ಪಗೌಡ ಬಿರಾದಾರ
ಬಿ.ವಿ.ಎಸ್.ಸಿ ಮತ್ತು ಎ.ಹೆಚ್., ಎಮ್.ವಿ.ಎಸ್. ಸಿ., ಪಿ.ಹೆಚ್.ಡಿ.
ಮಿಂಚಂಚೆ: channuvet@gmail.com
ಮೊಬೈಲ್ ಸಂಖ್ಯೆ: 9686282173
ವೃತ್ತಿ ವಿವರ: ಮೂರು ವರ್ಷಗಳ ಕಾಲ ಪಶುವೈದ್ಯರಾಗಿ ಹಾಗೂ ಎಂಟು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವಿಶ್ವವಿದ್ಯಾಲಯದ ವಿಸ್ತರಣಾ ಆಧಾರಿತ ಸುಜಲಾ-III ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಎರಡು ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ರೈತರಿಗೆ ಮತ್ತು ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿದ್ಯಾರ್ಥಿ ಸಲಹೆಗಾರರಾಗಿ, ಎನ್.ಎಸ್.ಎಸ್. ಯೋಜನಾಧಿಕಾರಿಗಳಾಗಿ ಹಾಗೂ ಪ್ರವಾಸ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪಶುಸಂಗೋಪನಾ ಪಾಲಿಟೆಕ್ನಿಕ್ ಪ್ರಾಂಶುಪಾಲರಾಗಿ ಹೆಚ್ಚುವರಿ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ.
ಪ್ರಶಸ್ತಿ ವಿವರ: ಇವರಿಗೆ 6 ಪ್ರಶಸ್ತಿಗಳು ದೊರೆತಿದೆ
ಪ್ರಕಟಣೆಗಳು : ಸಂಶೋಧನೆ 20; ವಿಸ್ತರಣೆ 30; ಇನ್ನಿತರ ಲೇಖನಗಳು 15.
ಸಂಪರ್ಕಿಸಿ:
ಪ್ರಾಂಶುಪಾಲರು,
ಪಶುಸಂಗೋಪನಾ ಪಾಲಿಟೆಕ್ನಿಕ್, ದೋರನಹಳ್ಳಿ
ಶಹಪುರ ತಾ. ಯಾದಗಿರಿ ಜಿಲ್ಲೆ
ಕರ್ನಾಟಕ-585223
ಮಿಂಚಂಚೆ: ahpdornhalli@gmail.com
ಮೊಬೈಲ್ ಸಂಖ್ಯೆ: 9686282173