+91-8482-245241 regkvafsu@gmail.com

ಹೈನು ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗ

ಹೈನು ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗವು ಸ್ನಾತಕ ಪದವಿಯ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ. ವಿಭಾಗದ ಮುಖ್ಯಸ್ಥರಾಗಿ ಡಾ. ಮಂಜುನಾಥ ಎಚ್ (ಪ್ರಾಧ್ಯಾಪಕರು) ಮತ್ತು ಎರಡು ಹಂಗಾಮಿ ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸುವುದು ಮತ್ತು ಅವುಗಳ ಗುಣಮಟ್ಟದ ವೃದ್ಧಿಗೆ ಬೇಕಾಗುವ ಕೌಶಲ್ಯಗಳ ತರಬೇತಿಯನ್ನು ನೀಡುತ್ತಿದೆ. ಹಾಲಿನ ಪದಾರ್ಥಗಳೊಂದಿಗೆ ಬೇರೆ ಆಹಾರ ಪದಾರ್ಥಗಳಾದ ಹಣ್ಣು, ತರಕಾರಿ ಮತ್ತು ಅವುಗಳ ಉತ್ಪನ್ನಗಳು ಮತ್ತು ನೀರು, ಗಾಳಿ ಹಾಗೂ ಮಣ್ಣಿನ ಪರೀಕ್ಷೆಯ ಬಗ್ಗೆ ತರಬೇತಿ ನೀಡಲಾಗುತ್ತ್ತಿದೆ. ಆಹಾರದ ಗುಣಮಟ್ಟದಿಂದ ಗ್ರಾಹಕರ ಆರೋಗ್ಯದ ಮೇಲಾಗುವ ಪರಿಣಾಮದ ಮಾಹಿತಿ ಹಾಗೂ ಅದರಲ್ಲಿ ಸೂಕ್ಷ್ಮಜೀವಾಣುಗಳ ಪಾತ್ರದ ಬಗ್ಗೆಯೂ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತ್ತಿದೆ.