+91-8482-245241 regkvafsu@gmail.com

ಹೈನು ವಹಿವಾಟು ನಿರ್ವಹಣೆ ವಿಭಾಗ

ಹೈನು ವಹಿವಾಟು ನಿರ್ವಹಣೆ ವಿಭಾಗವು ಸ್ನಾತಕ ಪದವಿಯ ಪಠ್ಯಕ್ರಮಗಳನ್ನು ವಿದಾರ್ಥಿಗಳಿಗೆ ಬೋಧಿಸುತ್ತಿದೆ. ಡಾ. ದೇವರಾಜು ಆರ್., ಸಹಾಯಕ ಪ್ರಾಧ್ಯಾಪಕರು, ವಿಭಾಗದ ಪ್ರಭಾರಿ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಹಂಗಾಮಿ ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹಾಲಿನ ವ್ಯಾಪಾರ, ವ್ಯವಹಾರಕ್ಕಾಗಿ ಬೇಕಾಗುವ ನಿರ್ವಹಣೆ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಹೈನು ವಿಸ್ತರಣೆ ಜ್ಞಾನ, ಹೈನು ಅರ್ಥಶಾಸ್ತ್ರ, ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದ ಬಗ್ಗೆ, ಹಾಲಿನ ಸಂಸ್ಕರಣಾ ಘಟಕ ಸ್ಥಾಪಿಸಿ ಯಶಸ್ವಿ ನಿರ್ವಹಣೆಗೆ ಬೇಕಾಗುವ ಕೌಶಲ್ಯಗಳು, ಹಣಕಾಸಿನ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಹೈನು ಉದ್ದಿಮೆದಾರರಾಗಲು ಬೇಕಾಗುವ ಕೌಶಲ್ಯಗಳು, ಜೊತೆಗೆ ಸಂಖ್ಯಾಶಾಸ್ತ್ರ ಮತ್ತು ಗಣಕ ಯಂತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಸಿಕೊಡಲು ವಿಭಾಗವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ್ತಿದೆ.