+91-8482-245241 regkvafsu@gmail.com

ಹೈನು ರಸಾಯನಶಾಸ್ತ್ರ ವಿಭಾಗ

ಹೈನು ರಸಾಯನಶಾಸ್ತ್ರ ವಿಭಾಗವು ಸ್ನಾತಕ ಪದವಿಯ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ. ಪ್ರಾಧ್ಯಾಪಕರಾದ ಡಾ. ಮಂಜುನಾಥ ಎಚ್. ವಿಭಾಗದ ಪ್ರಭಾರಿ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಹಂಗಾಮಿ ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ರಾಸಾಯನಿಕ ಗುಣಮಟ್ಟ, ರಾಸಾಯನಿಕ ಸಂಯೋಜನೆ ಪರೀಕ್ಷಿಸಲು ಬೇಕಾಗುವ ನಿಪುಣತೆಯನ್ನು ಕಲಿಸಲಾಗುತ್ತಿದೆ. ಜೀವ ರಸಾಯನಶಾಸ್ತ್ರ, ಹಾಲಿನ ಭೌತಿಕ ರಸಾಯನಶಾಸ್ತ್ರ, ಹಾಲಿನ ಮಾನವ ಪೆÇೀಷಣೆ, ಹಾಲಿನ ಉತ್ಪನ್ನಗಳ ರಸಾಯನಶಾಸ್ತ್ರ, ಆಹಾರ ರಸಾಯನಶಾಸ್ತ್ರ, ಹಾಲಿನ ರಾಸಾಯನಿಕ ಗುಣಮಟ್ಟದ ಜ್ಞಾನ ಮತ್ತು ಕೌಶಲ್ಯತೆ ಕಲಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ನೀಡಲಾಗುತ್ತಿದೆ.