+91-8482-245241 regkvafsu@gmail.com

ಹೈನು ತಂತ್ರಜ್ಞಾನ ವಿಭಾಗ

ಹೈನು ತಂತ್ರಜ್ಞಾನ ವಿಭಾಗವು ಸ್ನಾತಕ ಪದವಿಯ ಪಠ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದೆ. ಡಾ. ಶಶಿಕುಮಾರ ಸಿ. ಎಸ್., ಸಹಾಯಕ ಪ್ರಾಧ್ಯಾಪಕರು ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇಬ್ಬರು ಹಂಗಾಮಿ ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಬೋಧನಾ ಚಟುವಟಿಕೆಗಳಾದ ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿಶ್ಲೇಷಣೆ, ಆಹಾರ ವಿತರಣೆ ಮತ್ತು ಪ್ಯಾಕೆಜಿಂಗ್ ಬಗ್ಗೆ ಜ್ಞಾನವನ್ನು ನೀಡುತ್ತ್ತಿದೆ. ವಿಭಾಗದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಪೂರಕವಾದ ಯಂತ್ರೋಪಕರಣಗಳಿವೆ. ಸಣ್ಣ ರೈತರು, ಯುವ ಕೃಷಿಕರು ಹಾಗೂ ರೈತಾಪಿ ಮಹಿಳೆಯರ ಕೌಶಲ್ಯ ವರ್ಧನೆಗಾಗಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಸ್ನಾತಕ ಪದವಿಗಾಗಿ ಹೈನು ತಂತ್ರಜ್ಞಾನ ವಿಭಾಗವು 14 ವಿಷಯಗಳನ್ನು ಬೋಧಿಸುತ್ತಿದೆ. ಗ್ರಾಮೀಣ ಉದ್ಯಮಶೀಲತೆಗಾಗಿ ಜಾಗೃತಿ ಅಭಿವೃದ್ಧಿ ಯೋಜನೆ ಆಯೋಜಿಸುವಲ್ಲಿ ವಿಭಾಗವು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.