+91-8482-245241 regkvafsu@gmail.com

ಪಶುವೈದ್ಯಕೀಯ ರೋಗ ವಿಜ್ಞಾನ ವಿಭಾಗ

ಪ್ರಾಣಿ ರೋಗ ವಿಜ್ಞಾನ ವಿಭಾಗವು ಪಶುವೈದ್ಯಕೀಯ ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ರೋಗನಿರ್ಣಯಕ್ಕಾಗಿ ಅನುಕೂಲವಾಗುವಂತೆ ಮರಣೋತ್ತರ ಪರೀಕ್ಷಾ ಕೊಠಡಿ, ಚಿಕಿತ್ಸಾ ರೋಗಶಾಸ್ತ್ರ, ಸೈಟೋಪೆಥಾಲಜಿ, ಬಯಾಪ್ಸಿ, ಹಿಸ್ಟೋಪೆಥಾಲಜಿ ಪ್ರಯೋಗಾಲಯಗಳ ಸೌಲಭ್ಯಗಳನ್ನು ಹೊಂದಿದೆ.

ಸ್ಥಳೀಯ ಪಶುವೈದ್ಯರ ಸಹಾಯದಿಂದ ವಿದ್ಯಾರ್ಥಿಗಳು ಮತ್ತು ಸಂದರ್ಶಕರ ಮಾಹಿತಿಗೆ ಅಗತ್ಯವಿರುವ ಎಲ್ಲಾ ಪ್ರಾತಿನಿಧಿಕ ಮಾದರಿಗಳನ್ನು ಇರಿಸಲು ರೋಗಶಾಸ್ತ್ರ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.

ಜಾನುವಾರು, ಕೋಳಿ, ಪ್ರಯೋಗಾಲಯ ಪ್ರಾಣಿಗಳು ಮತ್ತು ಕಾಡುಪ್ರಾಣಿಗಳ ನೆಕ್ರೋಪ್ಸಿ, ಸೈಟೋಪೆಥಾಲಜಿ, ಹಿಸ್ಟೋಪೆಥಾಲಜಿ ಮತ್ತು ರೋಗನಿರ್ಣಯಕ್ಕಾಗಿ ಕ್ಲಿನಿಕಲ್ ಪೆಥಾಲಜಿಯ ಸೇವೆಗಳನ್ನು ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣಕ್ಕೆ ನೀಡಲಾಗುತ್ತಿದೆ. ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಮಾಡಲಾಗುತ್ತಿದೆ.