+91-8482-245241 regkvafsu@gmail.com

ಪಶುವೈದ್ಯಕೀಯ ಮತ್ತು ಪಶುಪಾಲನಾ ವಿಸ್ತರಣ ಶಿಕ್ಷಣ ವಿಭಾಗ

ಪಶುವೈದ್ಯಕೀಯದ ಪದವಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳಾದ ಶ್ರವಣ-ದೃಶ್ಯ ಸಾಧನಗಳು, ಪ್ರಯೋಗಾಲಯಗಳು, ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣ ಸಲಕರಣೆಗಳು, ಚಿಕ್ಕ ಸಭಾಂಗಣ ಇವೆ. ವಿವಿಧ ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲಾಗಿದೆ. ರೈತರಿಗೆ ಮತ್ತು ಪಶುವೈದ್ಯರುಗಳಿಗೆ ತರಬೇತಿ, ಕ್ಷೇತ್ರ ಪ್ರಾತ್ಯಕ್ಷಿತೆಗಳು, ಪಶುಚಿಕಿತ್ಸಾ ಶಿಬಿರಗಳು, ಜಾನುವಾರು ಪ್ರದರ್ಶನಗಳು, ಗುಂಪು ಚರ್ಚೆಗಳು ಇನ್ನಿತರೆ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರೈತರಿಗೆ ಮತ್ತು ಇತರೆ ಆಸಕ್ತರಿಗೆ ಪಶುಪಾಲನೆಯ ಬಗ್ಗೆ ಸುಧಾರಿತ ಮತ್ತು ನೂತನ ತಂತ್ರಜ್ಞಾನಗಳನ್ನು ರೇಡಿಯೋ ಕಾರ್ಯಕ್ರಮ, ಜನಪ್ರಿಯ ಲೇಖನಗಳು, ಮಡಿಚಿಕೆಗಳು, ಕೈಪಿಡಿಗಳನ್ನು ಪ್ರಕಟಿಸಲಾಗುತ್ತಿದೆ.