+91-8482-245241 regkvafsu@gmail.com

ಪಶು ಶರೀರಕ್ರಿಯಾ ಮತ್ತು ಜೀವರಸಾಯನ ವಿಜ್ಞಾನ ವಿಭಾಗ

ಸ್ನಾತಕ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಶರೀರಕ್ರಿಯಾಶಾಸ್ತ್ರ ಮತ್ತು ಜೀವರಸಾಯನಶಾಸ್ತ್ರ ವಿಷಯಗಳ ಬೋಧನೆ ಮಾಡಲಾಗುವುದು. ಪಶುವೈದ್ಯಕೀಯ ಶರೀರಕ್ರಿಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು (ಎಮ್.ವಿ.ಎಸ್‍ಸ್ಸಿ) ನಡೆಸಲಾಗುತ್ತದೆ. ಜೀವರಸಾಯನಶಾಸ್ತ್ರದ ಸ್ನಾತಕೋತ್ತರ ಕೋರ್ಸಗಳನ್ನು ಇತರೆ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಮೈನರ್ ಮತ್ತು ಪೋಷಕ ಕೋರ್ಸುಗಳನ್ನಾಗಿ ಅಧ್ಯಯನ ಮಾಡಬಹುದಾಗಿದೆ. ವಿಭಾಗವು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. ಸೆಮಿ ಆಟೋ-ಬಯೋಕೆಮಿಸ್ಟ್ರಿ ಅನಾಲ್ಯೈಜರ್, ಆಟೋ-ಹೆಮ್ಯಾಟಾಲಾಜಿ ಅನಲೈಜರ್, ಮೈಕ್ರೋ ಪ್ಲೇಟ್ ರೀಡರ್, ಥರ್ಮೋಸೈಕ್ಲರ್, ಅಲ್ಟ್ರಾ ವೈಲೆಟ್-ವಿಸಿಬಲ್ ಸ್ಪೆಕ್ಟ್ರೋಫೋಟೋಮೀಟರ್ ಮತ್ತು ಎಲೆಕ್ಟ್ರೋಫೋರೆಸಿಸ್ ಉಪಕರಣಗಳು ಈ ವಿಭಾಗದಲ್ಲಿ ಲಭ್ಯವಿರುವ ಕೆಲವು ಪ್ರಮುಖ ಸಂಶೋಧನಾ ಸೌಲಭ್ಯಗಳಾಗಿವೆ.